ಮಂಗಳವಾರ, ಸೆಪ್ಟೆಂಬರ್ 6, 2011

ಕೈದಿ ನಂಬರ್‌ 697 ಸತ್ಯ ಹೇಳುವುದು ಕಷ್ಟ, ಹೇಳದಿರುವುದು ಇನ್ನೂ ಕಷ್ಟ

ಸತ್ಯ ಏನೆಂಬುದು ಗೊತ್ತಿರುತ್ತದೆ. ಆದರೆ, ಹೇಳಲಾಗುವುದಿಲ್ಲ. ಭಂಡತನದಿಂದ ತನ್ನ ನಿರ್ಣಯವನ್ನು ಜಾರಿಗೊಳಿಸುವ ವ್ಯಕ್ತಿ ತ ಪ್ಪು ಮಾಡುತ್ತಿದ್ದಾನೆ ಎಂದು ತಿಳಿದಿದ್ದರೂ, ಅದನ್ನುಹೇಳಲಾಗುವುದಿಲ್ಲ.
ಹೆಲಿಕಾಪ್ಟರ್‌, ಐಶಾರಾಮಿ ಕಾರು, ಉಳಿಯಲು ಭವ್ಯ ಬಂಗಲೆ ಹೈಫೈ ಜೀವನ ನಡೆಸುತ್ತಿದ್ದ ಬಳ್ಳಾರಿ ಗಣಿಧಣಿ
ಮಾಜಿ ಸಚಿವ ಹಾಗೂ ಓಬಳಾಪುರಂ ಮೈನಿಂಗ್‌ ಕಂಪನಿಯ ಮಾಲೀಕ ಗಾಲಿ ಜನಾರ್ದನ ರೆಡ್ಡಿ ತಾವು ಇಷ್ಟು ಶೀಘ್ರ ಜೈಲು ಕಂಬಿ ಹಿಂದೆ ಹೋಗುವ ಬಗ್ಗೆ ಕನಸು ಮನಸಿನಲ್ಲೂ ಎಣಿಸಿರಲಿಲ್ಲ. ಇದೀಗ ಅದಿರು ಲೂಟಿ, ಗಡಿನಾಶ ಆರೋಪದಲ್ಲಿ ಬಂಧಿಯಾಗಿರುವ ರೆಡ್ಡಿ ಬಿಸ್ಕೆಟ್, ಕಿಚಡಿ ಸೇವನೆ ಮಾಡುವ ಮೂಲಕ ಜೈಲು ದಿನಚರಿ ಆರಂಭವಾಗಿದೆ.
ಅರಸರಂತಿದ್ದ ಜನಾರ್ದನ ರೆಡ್ಡಿ ಹೈದರಾಬಾದ್‌ನ ಚಂಚಲಗುಡ ಜೈಲಿನ ಸಿ ಕ್ಲಾಸ್‌ ಸೆಲ್‌ನಲ್ಲಿರುವ ಸಾಮಾನ್ಯ ಕೈದಿಗಳು. ಮಲಗಲು ಚಾಪೆ ಮತ್ತು ದಿಂಬು ನೀಡಲಾಗಿದ್ದು,
ಸಿ ದರ್ಜೆ ಸೆಲ್‌ನಲ್ಲಿರುವ ಇತರೆ 17 ಕೈದಿಗಳೊಂದಿಗೆ ಅವರನ್ನೂ ಇರಿಸಲಾಗಿದೆ ಎಂದು ತಿಳಿಸಿರುವ ಜೈಲಿನ ಅಧೀಕ್ಷಕರು, ಬಂಧಿತರಿಗೆ ಬ್ಲಾಕ್‌ ಅಂಡ್‌ ವೈಟ್‌ ಟಿವಿ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ತಮಗೆ ಇಂಗ್ಲಿಷ್‌ ಪೇಪರ್‌ ನೀಡುವಂತೆ ರೆಡ್ಡಿ ಅವರು ಸಲ್ಲಿಸಿದ್ದ ಕೋರಿಕೆಯನ್ನೂ ಜೈಲಿನ ಅಧಿಕಾರಿಗಳು ತಿರಸ್ಕರಿಸಿದ್ದಾರೆ.
ಚಂಚಲಗುಡ ಜೈಲಿನಲ್ಲಿರುವ ಜನಾರ್ದನ ರೆಡ್ಡಿಗೆ ಕೈದಿ ನಂಬರ್‌ 697 ನೀಡಲಾಗಿದೆ.


ಮಂಗಳವಾರ, ಆಗಸ್ಟ್ 16, 2011

ಕನ್ನಡಿ ಸುಳ್ಳು ಹೇಳೋದಿಲ್ಲ

ಕನ್ನಡಿಯೇ ಇಲ್ಲದಿದ್ದರೇ?
ನಿಜ ಹೇಳಿ, ನೀವು ಹೇಗಿದ್ದೀರಿ ಅಂತ ನಿಮಗೆ ಗೊತ್ತಾ?
ಛೆ, ಇದೆಂಥ ಅಸಂಬದ್ಧ ಪ್ರಶ್ನೆ ರೀ? ನಾವು ಹೇಗಿದೀವಿ ಅಂತ ಗೊತ್ತಿಲ್ದೆ ಏನು? ನಾವು ಚನ್ನಾಗಿದೀವಿ. ಒಂದಷ್ಟು ಜಾಸ್ತಿಯೋ, ಕಮ್ಮಿಯೋ- ಅಂತೂ ಸೌಂದರ್ಯವಿದೆ. ನಾವು ದಿನಾಲೂ ಕನ್ನಡಿಯ ಮುಂದೆ ನಿಂತು ಅದನ್ನೇ ನೋಡಿಕೊಳ್ತಾ ಇರ್ತೀವಿ. ಕನ್ನಡಿಯ ಮುಂದೆ ನಿಂತೇ ಕ್ರಾಪು ಸರಿಮಾಡ್ಕೋತೀವಿ. ಮೊಡವೇನ ಕಿತ್ತು ಹಾಕ್ತೀವಿ. ದಿಢೀರ್ ಕಾಣಿಸಿಕೊಂಡಿರುವ ಬಿಳಿ ಕೂದಲಿಗೆ ಒಂದು ಗತಿ ಕಾಣಿಸ್ತೀವಿ. ಚಿಕ್ಕಂದಿನಲ್ಲಿ ಬಿದ್ದಾಗ ಆದ ಗಾಯದ ಕಲೆಯನ್ನು; ಚಿಕ್ಕಂದಿನಲ್ಲಿ ಹಾಕಿಸಿಕೊಂಡ ಇಂಜಕ್ಷನ್ನಿಂದ ಆದ ಕಾಸಿನಗಲದ ಮಚ್ಚೆಯನ್ನು ದಿನಕ್ಕೆ ಎರಡು ಬಾರಿ ನೋಡ್ಕೊಳ್ತಾ ಇದೀವಿ. ಹೀಗಿರುವಾಗ ನೀವು ಹೇಗಿದೀರ ಅಂತ ಕೇಳ್ತೀರಲ್ಲ.
ಪ್ರಶ್ನೆ ಇರೋದೇ ಅಲ್ಲಿ. ನೀವು ತೆಳ್ಳಗೆ-ಬೆಳ್ಳ ಬೆಳ್ಳಗೆ; ಗೋದಿ ಬಣ್ಣಕ್ಕೆ ಅಥವಾ ಆ ಕಡೆಗೆ ಪೂರ್ತಿ ಕಪ್ಪಲ್ಲ, ಈ ಕಡೇಲಿ ಪೂರ್ತಿ ಬಿಳಿಯಲ್ಲ ಅನ್ನೋ ಥರ-ಎಣ್ಣೆ ಗಂಪಿನ ದೇಹಸೌಂದರ್ಯ ಹೊಂದಿದವರೇ ಆಗಿರಬಹುದು. ಆದರೆ, ನಾವು ಹೇಗಿದೀವಿ, ನಮ್ಮ ಮುಖ ನಿಜಕ್ಕೂ ಹೇಗಿದೆ ಅನ್ನೋದು ಆ ಭಗವಂತನಾಣೆಗೂ ನಮಗೆ ಗೊತ್ತಿಲ್ಲ. ನಾವು ಹೇಗಿದ್ದೇವೆ ಅನ್ನೋದನ್ನು ತೋರಿಸಿಕೊಟ್ಟಿರೋದು-ಕನ್ನಡಿ! ಒಪ್ತೀರ?
ಒಂದು ವೇಳೆ ಈ ಜಗತ್ತಿನಲ್ಲಿ ಕನ್ನಡಿ ಎಂಬುದೇ ಇಲ್ಲದಿರುತ್ತಿದ್ದರೆ ನಾವು ಹೇಗಿರ್ತಾ ಇದ್ವಿ?
ಇಂಥದೊಂದು ಪ್ರಶ್ನೆ ಹಾಕಿಕೊಂಡರೆ ಮೊದಲಿಗೆ ಅಚ್ಚರಿಯಾಗುತ್ತದೆ. ನಂತರ, ನಗು ಬರುತ್ತದೆ. ಹಿಂದೆಯೇ ಒಂಥರಾ ಹೆದರಿಕೆ ಕೂಡ ಆಗುತ್ತದೆ. ಯಾಕೆ ಗೊತ್ತಾ? ಇವತ್ತು ನಮಗೆಲ್ಲ ನಾವು ಹೀಗೇ ಇದೀವಿ ಅಂತ ತೋರಿಸಿಕೊಟ್ಟಿರುವುದೇ ಕನ್ನಡಿ. ಅದರಲ್ಲಿ ಮತ್ತೆ ಮತ್ತೆ ನಮ್ಮನ್ನು ನಾವೇ ನೋಡಿಕೊಂಡು, ಓಹ್ ಇದು ನಾನೇ ಎಂದು ಚಿಕ್ಕಂದಿನಿಂದಲೇ ಪಕ್ಕಾ ಮಾಡಿಕೊಂಡಿರುತ್ತೇವೆ. ಆ ನಂಬಿಕೆಯ ಆಧಾರದ ಮೇಲೆಯೇ ಮುಂದೆ ಫೋಟೊ ತೆಗೆಸಿಕೊಂಡು ನೋಡೋ, ನಾನು ಇಲ್ಲಿದೀನಿ ಎಂದು ಸಂಭ್ರಮ. ಏನಂತೀರ?